Skip to content

ದೇವಾಂಗ ಸಂಘ

ದೇವಾಂಗ ಸಂಘದ ಸವಲತ್ತುಗಳು

ಕಲ್ಯಾಣ ಮಂಟಪ

ದೇವಾಂಗ ಸಂಘ ಶಿಕ್ಷಣ ಸಂಸ್ಥೆ

ದೇವಾಂಗ ಟವರ್ಸ್

ದೇವಾಂಗ ಸಂಘ ನಡೆದು ಬಂದ ದಾರಿ:-

ದೇವಾಂಗ ಜನಾಂಗವು ಬೆಂಗಳೂರಿನ ಮೂಲ ನಿವಾಸಿಗಳಾಗಿದ್ದು, ಮೈಸೂರು ಸಂಸ್ಥಾನದ ರಾಜರಾದ ಕೃಷ್ಣರಾಜರ ಓಡೆಯರ ಕಾಲದಲ್ಲಿ ಕುಶಲಕರ್ಮಿಗಳನ್ನು ಕರೆಸಿ ಬಡಾವಣೆಗಳನ್ನು ನಿರ್ಮಿಸಿ ದೇವಾಂಗ ಜನಾಂಗದವರಿಗೆ ದೇವಾಂಗ ಪೇಟೆ ಎಂದು ಹೆಸರು ಕೊಟ್ಟು ಬಡಾವಣೆ ನಿರ್ಮಿಸಿದರು. ಕನ್ನಡ, ತೆಲುಗು ಮತ್ತು ಶಿವಾಚಾರ ದೇವಾಂಗದರವರು ಆ ಬಡಾವಣೆಯಲ್ಲಿ ಶೆಟ್ರು ಯಜಮಾನರನ್ನು ನೇಮಕ ಮಾಡಿಕೊಂಡು ಜೀವನ ನಡೆಸಿಕೊಂಡು ಬರುತ್ತಿದ್ದರು. ಈ ಮೂರು ಪಂಗಡಗಳ ಪ್ರಯತ್ನದ ಫಲವಾಗಿ ಶ್ರೀ ಪ್ರಸನ್ನ ಪಾರ್ವತಿ ಸಮೇತ ಶ್ರೀ ರಾಮಲಿಂಗ ಚೌಡೇಶ್ವರಿ ದೇವಿ ದೇವಾಸ್ಥನ ನಿರ್ಮಾಣವಾಯಿತು. ಪ್ರತಿಯೊಂದು ಪಂಗಡದವರು 4 ತಿಂಗಳ ಪೂಜಾ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದರು. ದೇವಾಂಗ ಜನಾಂಗದವರು ತಮ್ಮ ಮನೆಗಳ ಶುಭ ಕಾರ್ಯದಲ್ಲಿ ಅಂದರೆ ವಿವಾಹ ಕಾಲದಲ್ಲಿ ವಧು ವರರನ್ನು ದೇವಾಸ್ಥಾನಕ್ಕೆ ಕರೆದುಕೊಂಡು ಹೋಗಿ ಕುಲದೇವತೆ ಆರ್ಶೀವಾದ ಪಡೆಯುತ್ತಿದ್ದರು. 1903 ರಲ್ಲಿ ದೇವಾಂಗ ಜನಾಂಗದ ಹತ್ತು ಮಂದಿ ಸೇರಿ ದಕ್ಷಿಣಕಾಶಿ ಎನಿಸಿದೆ ಗವೀಪುರದಲ್ಲಿ ಜವಳಿ ಅಂಗಡಿ ಬಿ.ಅಪ್ಪಾಜಪ್ಪ ನವರಿಂದ 94 ½ X 76 ½ ಅಡಿ ವಿಸ್ತೀರ್ಣದ ಖಾಲಿ ಜಮೀನನ್ನು ಕರಾರಿನಲ್ಲಿ ಪಡೆದು ಕೊಂಚ ಭಾಗವನ್ನು ತುಮಕೂರು ತಿಮ್ಮಯ್ಯ ನವರಿಗೆ ಛತ್ರವನ್ನು ಕಟ್ಟಲು ನೀಡಿ, ಉಳಿದ ಜಾಗವನ್ನು ದೇವಾಂಗ ಜನಾಂಗದ ಹತ್ತು ಮಂದಿ ಛತ್ರವನ್ನು ಕಟ್ಟಿದರು. ಮದುವೆ ಮುಂತಾದ ಶುಭ ಸಮಾರಂಭಗಳು ನಡೆಯುತ್ತಿದ್ದವು, ಅದಕ್ಕೂ ಮೊದಲು ವಿವಾಹದ ಶುಭ ಕಾರ್ಯಗಳು ಪ್ರತಿಷ್ಠಿತರ ಹಜಾರಗಳಲ್ಲಿ ನಡೆಯುತ್ತಿದ್ದವು. ಶೆಟ್ರು ಯಜಮಾನರ ಆಳ್ವಿಕೆಯಲ್ಲಿ ವಿವಾಹ ಮತ್ತು ಶುಭ ಕಾರ್ಯಗಳಲ್ಲಿ ಜನಾಂಗದವರು ಶೆಟ್ರು ಯಜಮಾನರುಗಳಿಗೆ ಕಾಣಿಕೆ, ಗೌರವ ನೀಡುತ್ತಿದ್ದರು. 28 ಪೇಟೆ ಶೆಟ್ರು ಯಜಮಾನರುಗಳಿದ್ದು ಅವರುಗಳಲ್ಲಿ ಜನಾಂಗದವರು ಸುಖ ಜೀವನ ನಡೆಸುತ್ತಿದ್ದರು. ನೇಕಾರಿಗೆ ಕುಲ ಕಸುಬು ವಿದ್ಯಾಭ್ಯಾಸ ಅಗಣ್ಯ ಈ ರೀತಿ ಜೀವನ ಸಾಗಿತ್ತು.

Become a volunteer to help them